Published On: Sun, Jan 5th, 2014

೧೦-೦೧-೨೦೧೪ ರ ಒಳಗಾಗಿ ಕರ್ಕಶ ಧ್ವನಿ ಹಾರ್ನ್‌ ತೆಗೆಯಲು ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ

Share This
Tags
ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಸ್.ಎಲ್.ಪಿ(ಸಿ) ನಂ.೨೫೨೩೭/೨೦೧೦ ದಿನಾಂಕ:೧೧-೧೨-೨೦೧೩ ರಲ್ಲಿ ಎಲ್ಲಾ ವಾಹನದ ಮಾಲೀಕರು / ಬಳಕೆದಾರರು ವಾಹನಗಳಿಗೆ ಅಳವಡಿಸಿಕೊಂಡಿರುವ ಬಹುಸ್ವರದ ಹಾರ್ನ್‌ಗಳು, ರಿವರ್ಸ್ ಹಾರ್ನ್‌ಗಳು ಮತ್ತು ಇತರೆ ಕರ್ಕಶ ಧ್ವನಿ ಉಂಟುಮಾಡುವಂಥಹ ಸಾಧನಗಳನ್ನು ದಿನಾಂಕ: ೧೦-೦೧-೨೦೧೪ ರ ಒಳಗಾಗಿ ತೆಗೆಯಲು ನಿರ್ದೇಶಿಸಿದೆ.
ನಿಷೇಧವಾಗಿರುವ ಭಾಗಶ: ಪಟ್ಟಿಯಲ್ಲಿ ಒಳಗೊಂಡಿರುವ ಧ್ವನಿ ಉತ್ಪಾದಿಸುವ ಸಾಧನಗಳು:
ವಾಯು ಒತ್ತಡದ ಹಾರ್ನ್‌ಗಳು, ಸಂಗೀತ ಹಾರ್ನ್ಸ್, ರಿವರ್ಸ್ ಹಾರ್ನ್ಸ್, ಹೂಟರ್ಸ್, ತುತ್ತೂರಿ ಮತ್ತು ವಾಹನಗಳಿಗೆ ಅನುಚಿತವಾಗಿ ಅಳವಡಿಸಿರುವ ಕಠಿಣ, ಕರ್ಕಶ, ತೀವ್ರ ಅಥವಾ ಅಪಾಯಕಾರಿ ಶಬ್ದಗಳನ್ನು ಉಂಟುಮಾಡುವಂತಹ ಸಾಧನಗಳು
ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಉದ್ದೇಶದಿಂದ ವಾಹನ ಉತ್ಪಾದಕರು ಅಳವಡಿಸಿರುವ ಹಾರ್ನ್ ಒಂದನ್ನು ಹೊರತುಪಡಿಸಿ (ಡೀಲರ್‌ಗಳಾಗಲಿ ಅಥವಾ ಕಾರು ಅಲಂಕೃತಗೊಳಿಸುವ ಅಂಗಡಿಗಳವರಿಂದ ಮಾರ್ಪಡಿಸದೇ ಇರುವ) ಕರ್ಕಶ ಶಬ್ದಗಳನ್ನು ಉಂಟುಮಾಡುವಂತಹ ಇತರೆ ಎಲ್ಲಾ ಸಾಧನಗಳನ್ನು ಈ ಕೂಡಲೇ ತೆಗೆದುಹಾಕಿ ಸಂಚಾರ ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

About the Author

-

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Powered By Indic IME