Published On: Tue, Aug 29th, 2017

ದಲಿತ ಕುಟುಂಬಗಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ವಿಶೇಷ ಆತಿಥ್ಯ

Share This
Tags

ಯಡಿಯೂರಪ್ಪ ಮನೆಯಲ್ಲಿ ಹಬ್ಬದ ಸಡಗರ

ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ–ಶರ್ಟ್‌ ಉಡುಗೊರೆ

 

ಬೆಂಗಳೂರುಬಿಜೆಪಿ ಜನಸಂಪರ್ಕ ಅಭಿಯಾನದ ವೇಳೆ ಪಕ್ಷದ ನಾಯಕರಿಗೆ ಆತಿಥ್ಯ ನೀಡಿದ್ದ 31 ದಲಿತ ಕುಟುಂಬಗಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ಮನೆಯಲ್ಲಿ ವಿಶೇಷ ಆತಿಥ್ಯ ಏರ್ಪಡಿಸಲಾಗಿತ್ತು.

ಮನೆಯಲ್ಲೇ ಸಿದ್ಧಪಡಿಸಿದ 18 ಬಗೆಯ ಖಾದ್ಯಗಳನ್ನು (ಹೋಳಿಗೆ, ಜಹಂಗೀರ್, ಪೂರಿ, ಸಾಗು, ಬದನೇಕಾಯಿ ಪಲ್ಯ, ಚಿತ್ರಾನ್ನ, ಅನ್ನ ಸಾಂಬಾರ್‌ ) ಮನೆಯಲ್ಲಿಯೇ ಸಿದ್ಧಪಡಿಸಲಾಗಿತ್ತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿ.ವೈ.ರಾಘವೇಂದ್ರ ಕೈಯಾರೆ ಊಟ ಬಡಿಸಿದರು.

ಅತಿಥಿಗಳಾಗಿ ಬಂದಿದ್ದ ಮಹಿಳೆಯರಿಗೆ ಸೀರೆ, ಹೂ, ಹಣ್ಣು ಮತ್ತು ಪುರುಷರಿಗೆ ಪಂಚೆ–ಶರ್ಟ್‌, ಶಲ್ಯವನ್ನು ಉಡುಗೊರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಮಾತನಾಡಿ, ‘ಇದು ನನ್ನ ಜೀವನದಲ್ಲಿ ಮರೆಯಲಾಗದ ಶುಭದಿನ. ದಲಿತ ಕುಟುಂಬಗಳು ತಮ್ಮ ಬಡತನದ ಮಧ್ಯೆಯೂ ನನಗೆ ಊಟ, ಉಪಹಾರ ನೀಡಿ ಸತ್ಕರಿಸಿವೆ. ಅಂತವರನ್ನು ನನ್ನ ಮನೆಗೆ ಕರೆದು ಆತಿಥ್ಯ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ’ ಎಂದರು.

About the Author

-

Powered By Indic IME