Published On: Wed, Jun 27th, 2018

ಪ್ರಥಮ ಇಟಾಲಿಯನ್ ಮಾದರಿಯ ಶೇಕ್ ಬಾರ್ ‘ಟೆಂಪ್ಟೀಸ್’ ಶಾಖೆಯನ್ನು ಪ್ರಸಿದ್ಧ ನಟಿ ತಾನ್ಯ ಹೋಪ್ ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು

Share This
Tags

ಟೆಂಪ್ಟೀಸ್ ದೇಶಾದ್ಯಂತ 17 ರಿಂದ 40 ಶಾಖೆಗಳಿಗೆ ವಿಸ್ತರಿಸಿದೆ.

ಬೆಂಗಳೂರು - ಜನವರಿ 28, 2018: ಟೆಂಪ್ಟೀಸ್  ಹೊಸ ಶಾಖೆ ಬೆಂಗಳೂರಿನ ಇಂದಿರಾನಗರದಲ್ಲಿ ಪ್ರಾರಂಭ ಮಾಡಿದೆ. ನಟಿ ತಾನ್ಯ ಹೋಪ್  ಜೊತೆಗೆ ಕಂಪನಿಯ ಪ್ರತಿನಿಧಿಗಳು, ಪ್ರಮುಖರು ನೂತನ ಶಾಖೆಯ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ್ದರು. ಟೆಂಪ್ಟೀಸ್ ಕಾರ್ಯ ನಿರ್ವಹಣಾ  ಅಧಿಕಾರಿಯಾದ ಕ್ರಿಶ್ ಮಗಪು ಮಾತನಾಡಿ   ಕೇವಲ ಒಂದೇ ವರ್ಷದಲ್ಲಿ ಭಾರತದ 6 ರಾಜ್ಯಗಳಲ್ಲಿ 17 ಔಟ್ಲೆಟ್ ಗಳನ್ನು ಪ್ರಾರಂಭಿಸಿದೆ ಮತ್ತು  ದೇಶಾದ್ಯಂತ ತಮ್ಮ ಶಾಖೆಗಳ ವಿಸ್ತರಣೆಗೆ ಒಂದು  ಹೆಜ್ಜೆ ಮುಂದಿರುತ್ತೇವೆ ಎಂದರು.

ಹೈದರಾಬಾದ್, ವಡೋದರ, ವಿಜಯವಾಡ, ಚೆನೈ, ವಿಶಾಖಪಟ್ನಂ, ಪುಣೆ ನಗರಗಳಲ್ಲಿ ಯಶಸ್ವಿಯಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಆಹಾರಪ್ರಿಯರ ಮನಸೂರೆ ಗೊಂಡಿರುವ ‘ಟೆಂಪ್ಟೀಸ್’ ದೇಶದಲ್ಲಿ ಪ್ರಥಮವಾಗಿ ತಂಪು ಖಾದ್ಯಗಳು ಮತ್ತು ತಂಪು ಕಾಫಿಯ ಹೊಸ ರೀತಿಯ ಪಾನೀಯ ಮತ್ತು ಆಹಾರೋತ್ಪನ್ನ  ಸೇವೆಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಬೇಕೆಂಬ ಆಶಯವನ್ನು ‘ಟೆಂಪ್ಟೀಸ್’ ನ ಕಾರ್ಯ ನಿರ್ವಹಣಾ  ಅಧಿಕಾರಿ ಕ್ರಿಶ್ ಮಗಪು ವ್ಯಕ್ತಪಡಿಸಿದರು.

ಈ ವಿಶೇಷ ಸಂದರ್ಭದಲ್ಲಿ ಹರ್ಷಚಿತ್ತರಾಗಿ ನಟಿ ತಾನ್ಯಹೋಪ್ ಮಾತನಾಡುತ್ತ,  ‘ಟೆಂಪ್ಟೀಸ್’ ಹೊಸ ಶಾಖೆ ಬೆಂಗಳೂರಲ್ಲಿ ಆರಂಭಿಸಿರುವುದು ನನಗೆ ಖುಷಿ ತಂದಿದೆ, ಇಂತಹ ಅದ್ಭುತ ಆಹಾರೋತ್ಪನ್ನ ಸಂಸ್ಥೆಯು ಮತ್ತಷ್ಟು ಜನಪ್ರಿಯವಾಗಿ ಆಹಾರಪ್ರಿಯರನ್ನು ಸೆಳೆಯುವಂತಾಗಲಿ ಎಂದರು.

ಟೆಂಪ್ಟೀಸ್ ನ ಕಾರ್ಯವ್ಯವಸ್ಥಾಪಕರಾದ ಶ ಹರ್ಷಗದ್ದೆ ಈ ಸಂದರ್ಭದಲ್ಲಿ ಮಾತನಾಡುತ್ತಾ…ಖಾದ್ಯಪ್ರಿಯರ ರುಚಿಗೆ ತಕ್ಕಂತೆ ನಾವು ಹೊಸ ಆಹಾರೋತ್ಪನ್ನಗಳನ್ನು ಪರಿಚಯಿಸಲು ಹೆಮ್ಮೆ ಎನಿಸಿದೆ, ಗ್ರಾಹಕರ ಖುಷಿಯೇ ತಮ್ಮ ಸಮೂಹದ ಮಹತ್ವಾಕಾಂಕ್ಷೆ ಅವರು ಇಷ್ಟ ಪಡುವ ರೀತಿಯಲ್ಲಿ ಹೊಸರುಚಿಗಳನ್ನ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.

ಟೆಂಪ್ಟೀಸ್ ನ ಇಂದಿರಾನಗರದ ಈ ನೂತನ ಶಾಖೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯಲ್ಲಿ ರಾಷ್ಟ್ರೀಯ ಮತ್ತು ವಿದೇಶೀ ತಳಿಯ ಹಣ್ಣುಗಳ ಮೂಲಕ ತಯಾರಿಸಿದ  ತಂಪುಪಾನೀಯಗಳು ವಿಶೇಷ ರೀತಿಯ ಸವಿಯನ್ನು ಗ್ರಾಹಕರು ಆಸ್ವಾದಿಸುತ್ತಾರೆ ಎಂದರು, ಹಾಗೆಯೇ ಹೊಸರುಚಿಯಲ್ಲಿ ಚಾಕೋಲೆಟ್ಸ್,  ಬ್ರೌನ್ ಕೇಕ್ ಸಹ ಗ್ರಾಹಕರಿಗೇ ಇಲ್ಲಿ ಸಿಗುತ್ತವೆ ಎಂದರು.

ಬೆಂಗಳೂರಿನ ಹೊಸ  ಟೆಂಪ್ಟೀಸ್ ಔಟ್ ಲೆಟ್ ವಿಳಾಸ-  #4, ಕೆಳಮಹಡಿ, ನಂ.1083, 5ನೇ ಅಡ್ಡ ರಸ್ತೆ, 12ನೇ ಮುಖೆಯ ರಸ್ತೆ, ಕಾರ್ಪೋರೇಷನ್ ಬ್ಯಾಂಕು ಎದುರು, ಇಂದಿರಾನಗರ, ಬೆಂಗಳೂರು

About the Author

-

Powered By Indic IME