Published On: Sun, Aug 26th, 2018

ಭಾರತದಲ್ಲೇ ಪ್ರಪ್ರಥಮ ಬಾರಿಗೆ ಆಲ್ಫಾ ಎಂಬ ಹಾಲಿವುಡ್ ಅಮೆರಿಕನ್ ಹಿಸ್ಟೋರಿಕಲ್ ಸಿನಿಮಾ

Share This
Tags
ಪ್ರಿಮಿಯರ್ ಶೋ ಕಳೆದ ಗುರುವಾರ ಬೆಂಗಳೂರಿನ ಮಂತ್ರಿ ಮಾಲ್ನಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು.
ಸೋನಿ ಪಿಕ್ಚರ್ಸ್ ವತಿಯಿಂದ ರುಬಿನ್ ರಾಜ್ ಪ್ರೊಡಕ್ಷನ್ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲ್ಫಾ ಎಂಬ ಹಾಲಿವುಡ್ ಅಮೆರಿಕನ್ ಹಿಸ್ಟೋರಿಕಲ್ ಸಿನಿಮಾವನ್ನು ಪ್ರದರ್ಶಿಸಲಾಯ್ತು.
ಈ ಕಾರ್ಯಕ್ರಮಕ್ಕೆ ಬಿಗ್ಬಾಸ್ ವಿನ್ನರ್ ಪ್ರಥಮ್, ಅಮೃತರಾವ್, ಅನಿತಾ ಭಟ್, ಸಂಜನಾ ಪ್ರಕಾಶ್, ನಿರೂಪಕಿ ಹಾಗೂ ಮಾಡಲ್ ಮಯೂರಿ ಜೇಶಾ, ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿರುವ ಅನಿಲ್ ಶೆಟ್ಟಿ, ಲೆದರ್ ವಾರೆನ್ ಶೂ ಕಂಪನಿಯ ಸಿಇಓ ಸೌರಬ್ ಒಕ್ಕಲ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು. ಖ್ಯಾತ ಉದ್ಯಮಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಲ್ಬರ್ಟ್ ಹ್ಯೂಜಸ್ ನಿರ್ದೇಶನದ ಅಲ್ಫಾ ಚಿತ್ರ ಪ್ರಪಂಚದಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಸಂಪೂರ್ಣ ಸಾಹಸ ದೃಶ್ಯಗಳಿಂದ ಕೂಡಿರುವ ಈ ಚಿತ್ರದಲ್ಲಿ ಪ್ರಾಣಿ ಮತ್ತು ಮನುಷ್ಯನ ಸಂಬಂಧ ಯಾವ ರೀತಿ ಇರುತ್ತೆ ಅನ್ನೋದನ್ನ ತುಂಬಾ ಮನೋಜ್ಞವಾಗಿ ತೋರಿಸಲಾಗಿದೆ. ಹೀಗಾಗಿ ಅಲ್ಫಾ ಸಿನಿಮಾ ಬಗ್ಗೆ ಭಾರತದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಐನಾಕ್ಸ್ನಲ್ಲಿ ಸಿನಿಮಾ ನೋಡಿದ ಸೆಲಬ್ರಿಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಸೆಲಬ್ರಿಟಿ ಪ್ರಿಮಿಯರ್ ಶೋ ಅನ್ನೋದು ಒಂದು ಒಳ್ಳೆಯ ಯೋಜನೆಯಾಗಿದೆ.
ಹೀಗೆ ಕನ್ನಡ ಸಿನಿಮಾಗಳನ್ನು ಸೆಲಬ್ರಿಟಿ ಪ್ರಿಮಿಯರ್ ಶೋ ಮೂಲಕ ತೋರಿಸಿದರೆ ಚೆನ್ನಾಗಿರುತ್ತೆ ಅಂತ ಅಭಿಪ್ರಾಯಪಟ್ಟರು.

About the Author

-

Powered By Indic IME