Published On: Mon, Feb 11th, 2019

ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮ

Share This
Tags
ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ  ಸುರೇಶ್ ವಾಡ್ಕರ್  ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮವನ್ನು ಮಾಸ್ಟರ್ಸ್ ಆಫ್ ಮ್ಯೂಸಿಕ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿತ್ತು. 10/02/2019ರಂದು ಕೆಜಿ ರಸ್ತೆಯ ಶಿಕ್ಷಕ ಸದನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾರಂಭಿಕ ಮತ್ತು ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಸಂಸ್ಕೃತಿ, ಕಲಾ ಸೂಕ್ಷ್ಮ, ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ  ಎರಡು ಗಂಟೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರವು ಅಭ್ಯಾಸ ವಿಧಾನಗಳಲ್ಲಿ ಬದಲಾವಣೆ, ಸಮನ್ವಯತೆ, ಟೀಮ್ ವರ್ಕ್ ಸಾಮರ್ಥ್ಯಗಳು, ಭಾವನಾತ್ಮಕ ಸ್ಥಿರತೆ, ವಿಶ್ರಾಂತಿ ಕಲ್ಪನೆ, ಆತ್ಮವಿಶ್ವಾಸ ಹಾಗೂ  ಬುದ್ಧಿಶಕ್ತಿ  ಹೆಚ್ಚಿಸಲು ಉಪಯುಕ್ತವಾಗಿದೆ, ಮಕ್ಕಳು ವಯಸ್ಕರು ಯುವಜನರು ಸೇರಿದಂತೆ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗವಹಿದ್ದರು. ಈ ಕಾರ್ಯಾಗಾರದ  ಪತ್ರಿಕಾಗೋಷ್ಠಿ 09/02/2019ರಂದು ಬೆಂಗಳೂರಿನ ಗರುಡಾ ಮಾಲ್  ಇನಾಕ್ಸ್ ನಲ್ಲಿ  ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾ ವಾಡ್ಕರ್ ನಿತಿನ್ (ಅಜೀವಾಸನ್ ಸಿಇಒ) ,  ದರ್ಮಿಲ್ ಶಾ  ಹಾಗೂ  ಮಿಸ್  ಅರ್ಚನಾ  ಶಾ (ಜೈ ಇಂಚ್) ಉಪಸ್ಥಿತರಿದ್ದರು.

About the Author

-

Powered By Indic IME