Published On: Mon, Mar 11th, 2019

ಸೂಪರ್ ಸ್ಟಾರ್ ಸ್ ಪತ್ರಿಕೆ ವತಿಯಿಂದ “ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ- 2017” ಹಾಗೂ “ಮಾಧ್ಯಮ ಅಕಾಡೆಮಿ ಪ್ರಶಸ್ತಿ-2018”

Share This
Tags
ಮಾರ್ಚ್ 6 ನೇ ತಾರೀಖಿನಂದು ಸಂಜೆ 5:30ಕ್ಕೆ  ರವೀಂದ್ರ ಕಲಾಕ್ಷೇತ್ರದ ‘ನಯನ ಸಭಾಂಗಣ’ದಲ್ಲಿ, ಚಿತ್ರಮಂಡಳಿ ಹಾಗೂ ನಮ್ಮ ಸೂಪರ್ ಸ್ಟಾರ್ ಸ್ ಪತ್ರಿಕೆ ವತಿಯಿಂದ “ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ- 2017” ಹಾಗೂ “ಮಾಧ್ಯಮ ಅಕಾಡೆಮಿ ಪ್ರಶಸ್ತಿ-2018”ರ ವಿಜೇತರಿಗೆ “ಸನ್ಮಾನ ಸಮಾರಂಭ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಅಧ್ಯಕ್ಷ
ಚಿನ್ನೇ ಗೌಡರು ವಹಿಸಿದ್ದರು. ಹಾಗೂ ಕಾರ್ಯದರ್ಶಿ ಭಾ. ಮ. ಹರೀಶ್ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ವಾಣಿಜ್ಯ ಮಂಡಳಿಯ ಶಿಲ್ಪಾ ಶ್ರೀನಿವಾಸ್, ಕರಿಸುಬ್ಬು, ಕೆ. ಎಂ, ವೀರೇಶ್, ಉಮೇಶ್ ಬಣಕಾರ್, ಭಾ. ಮಾ. ಗಿರೀಶ್ ಮತ್ತು  ಖ್ಯಾತ ಚಲನಚಿತ್ರ ನಟಿ ಭಾವನಾ ರಾವ್ ಮತ್ತು ಮಿಸ್ ಸೌತ್ ಇಂಡಿಯಾ 2018 ಸುಷ್ಮಿತಾ ಗೋಪಿನಾಥ್, ಸ್ಪರ್ಶ ರೇಖಾ, ಸುಮನ್ ನಗರ್ ಕರ್, ಸೇರಿದಂತೆ ಇತರ  ನಟ ನಟಿಯರೂ ಹಲವಾರು ಗಣ್ಯರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳು ಮಾತನಾಡಿ, ಆಸ್ಕರ್ ಕೃಷ್ಣ ಹಾಗೂ ನಮ್ಮ ಸೂಪರ್ ಸ್ಟಾರ್ ಸ್ ಪತ್ರಿಕೆಯವರು   ಕಲಾವಿದರನ್ನು ಅಭಿನಂದಿಸುವ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಇನ್ನು ದೊಡ್ಡ ಮಟ್ಟದಲ್ಲಿ ಸಮಾರಂಭ ಆಯೋಜನೆ ಮಾಡಲಿ ಎಂದು ಹಾರೈಸಿದರು. ಶ್ರೀ ಚಿನ್ನೇಗೌಡರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಶುಭ ಕೋರಿದರು. ಕೆಲವು ಹಿರಿಯ ನಟರು ಕಾರ್ಯಕ್ರಮಕ್ಕೆ ಬರದಿದ್ದನ್ನು ಗಮನಿಸಿ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮಾಧ್ಯಮ 2018 ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಫೋಟೋ ಜರ್ನಲಿಸ್ಟ್ ‘ನಾಗೇಶ್ ಕುಮಾರ್’ ಹಾಗೂ ಪತ್ರಕರ್ತ ದೇಶಾದ್ರಿ ಹೊಸಮನೆ , ಸೇರಿದಂತೆ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರ, ತಂತ್ರಜ್ಞರ, ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಆಯೋಜಿಸಿದ ಆಸ್ಕರ್ ಕೃಷ್ಣ ಮಾತನಾಡಿ ಕಾರ್ಯಕ್ರಮಕ್ಕೆ, ಸಹಯೋಗ ನೀಡಿದ ಹಾಗೂ ಆಗಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

About the Author

-

Powered By Indic IME