Published On: Tue, Nov 26th, 2019

ಶಿವ ಪಾರ್ವತಿ ಕಲ್ಯಾಣನೋತ್ಸವ ಹಾಗೂ ಶಯನೋತ್ಸವ ಧಾರ್ಮಿಕ ಕಾರ್ಯಕ್ರಮ

Share This
Tags

ಬೆಂಗಳೂರಿನ ಪದ್ಮನಾಭ ನಗರದ ಸಮೀಪದ ಕದಿರೇನ ಹಳ್ಳಿ ಇಂದಿಗೂ ಬ್ರಹತ್ ನಗರದ ಗದ್ದಲದಲ್ಲಿಯೂ ಗ್ರಾಮಾಂತರ ಸೊಗಡಿನ ವಾಸನೆಯನ್ನ ಉಳಿಸಿಕೊಂಡಿದೆ. ಪುರಾತನವಾಗಿ ದನಗಳ ಜಾತ್ರೆಗೆ  ಹೊರಟಿದ್ದ ಭಕ್ತರಬ್ಬರಿಗೆ  ನದಿಯಲ್ಲಿ ಸಿಕ್ಕಿದ ಪಾರ್ವತಿ ವಿಗ್ರಹವನ್ನ ದೇವರ ಅನತಿಯಂತೆ ಕದಿರೇನ ಹಳ್ಳಿಯಲ್ಲಿ  ಪ್ರತಿಷ್ಠಾಪನೆ ಮಾಡಲಾಗಿದೆ.  ಪ್ರತಿವರ್ಷ ಸ್ವಾತಿ ನಕ್ಷತ್ರದಂದು  ಶಿವ ಪಾರ್ವತಿ ಕಲ್ಯಾಣನೋತ್ಸವ ಹಾಗೂ ಶಯನೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಯುತ್ತ ಬಂದಿದೆ . ಇದರ ಅಂಗವಾಗಿ ಶಿವ ಪಾರ್ವತಿಯಾರ ಕಲ್ಯಾಣ, ತೊಗು ಮಂಚ ತೊಗುವುದು, ಪಂಜಿನ ಬೆಳಕಿನಲ್ಲಿ ಗ್ರಾಮದಲ್ಲಿ ದೇವರ ಮೆರವಣಿಗೆ ಹಾಗೂ ಶಯನೋತ್ಸವ ಇಂದು ನಡೆಯಿತು. ತಿಂಗಳಕಾಲ ಅಭಿಷೇಕ ಹಾಗೂ ಇಂದು ವಿಶೇಷ ಪೂಜಾಕಾರ್ಯ ಹಾಗು ಇಂದು ದೇವರಿಗೆ ವಿಶೇಷ ಅಲಂಕಾರ ನಡೆಯಿತು.

About the Author

-

Powered By Indic IME