Published On: Wed, Jan 22nd, 2020

ನವದೆಹಲಿಯ ಗಣರಾಜ್ಯೋತ್ಸವದಲ್ಲಿ ಪ್ರತಿನಿಧಿಸುವ ರಾಜ್ಯದ ಅನುಭವ ಮಂಟಪ ಸ್ತಬ್ಧಚಿತ್ರ: ಭರದಿಂದ ಸಾಗಿದ ಪೂರ್ವ ತಯಾರಿ ಸಿದ್ದತೆ

Share This
Tags

ಬೆಂಗಳೂರು ಜನವರಿ 22 (ಕರ್ನಾಟಕ ವಾರ್ತೆ) : ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯದಿಂದ ಪ್ರತಿನಿಧಿಸುವ 12ನೇ ಶತಮಾನದ ಅನುಭವ ಮಂಟಪದ ಸ್ಥಬ್ಧಚಿತ್ರದ ಪೂರ್ವತಯಾರಿಯನ್ನು  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಎಸ್.ಎನ್ ಸಿದ್ದರಾಮಪ್ಪ ಅವರು ಇಂದು ನವದೆಹಲಿಗೆ ಬೇೀಟಿ ನೀಡಿ ವೀಕ್ಷಿಸಿದರು.
ನಂತರ ನವದೆಹಲಿಯ ರಕ್ಷಣಾ ಮಂತ್ರಾಲಯದ ರಾಷ್ಟ್ರೀಯ ರಂಗ ಶಾಲಾ ಆವರಣದಲ್ಲಿಂದ್ದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಅವರು ಸ್ತಬ್ಧಚಿತ್ರದ ಬಗ್ಗೆ ವಿವರಣೆ ನೀಡಿದರು.

2020ರ ಜನವರಿ 26ರಂದು “ನವದೆಹಲಿಯಲ್ಲಿ ನಡೆಯಲಿರುವಗಣರಾಜ್ಯೋತ್ಸವ ಪರೇಡ್‍ನಲ್ಲಿ ಇಲಾಖೆ “ಅನುಭವಮಂಟಪ” ವಿಷಯಾಧಾರಿತ ಸ್ತಬ್ದಚಿತ್ರದೊಂದಿಗೆ” ಭಾಗವಹಿಸುತ್ತಿದ್ದು, ಸ್ತಬ್ದಚಿತ್ರದ ನಿರ್ಮಾಣಕಾರ್ಯ ಭರದಿಂದ ಸಾಗಿದೆ.

ಜಾತಿ, ಮತ, ಲಿಂಗ ಮತ್ತು ಧರ್ಮ ಬೇಧಗಳ ಮೇಲಾಟದ ಸಂದರ್ಭದಲ್ಲಿ ನಲುಗಿದ ಸಮಾಜದ ಪರಿವರ್ತನೆಗಾಗಿ ಸಂತ ಬಸವೇಶ್ವರರು ಹನ್ನೆರಡನೇ ಶತಮಾನದಲ್ಲಿ ನಡೆಸಿದ ಕರ್ನಾಟಕದ ಸಾಮಾಜಿಕ ಕ್ರಾಂತಿಯ ಪ್ರತಿರೂಪ–“ಅನುಭವಮಂಟಪ”.

ಸ್ತಬ್ದಚಿತ್ರದ ಮುಂಭಾಗದ ಪೀಠದಲ್ಲಿ “ಕಾಯಕವೇ ಕೈಲಾಸ” ಪರಿಕಲ್ಪನೆಗೆ ರೂಪ ಕೊಟ್ಟ ಮಹಾ ಸಂತ ಬಸವೇಶ್ವರರ ಪ್ರತಿಕೃತಿ. ಅದರ ಅಕ್ಕಪಕ್ಕ ಕಾಯಕ ಕಲ್ಪನೆಯ ಅರ್ಥ ವಿಸ್ತರಿಸಿದ ಅನುಭಾವಿಗಳು ತಮ್ಮ ಕಾಯಕದಲ್ಲಿ ಮಗ್ನರಾದ ಶಿಲ್ಪಗಳು. ಅನುಭವ ಮಂಟಪದ ಅರ್ಥ ವಿಸ್ತರಿಸಲು ಅದರ ಕೆಳ ಪೀಠದಲ್ಲಿ ಅಕ ್ಕನಾಗಮ್ಮ, ಶರಣೆ ಸತ್ಯಕ್ಕ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಕಲ್ಯಾಣಮ್ಮ, ಹರಳಯ್ಯ, ಕುಂಬಾರಗುಂಡಣ್ಣ, ಸಿದ್ಧರಾಮೇಶ್ವರ, ಬಾಚಿಕಾಯಕದ ಬಸಪ್ಪಅವರ ಪ್ರತಿಕೃತಿಗಳು ಇರಲಿವೆ.

ಸ್ತಬ್ದ ಚಿತ್ರದೊಂದಿಗೆ ಸಾಣ್ಣೇಹಳ್ಳಿ ಶಿವಸಂಚಾರ ನಾಟಕ ತಂಡದ 27 ಕಲಾವಿದರು ಭಾಗವಹಿಸುತ್ತಿದ್ದು, ಈ ಕಲಾವಿದರು ವಿವಿಧ ಶರಣರ ಪಾತ್ರ ಮತ್ತು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಅದರ ಹಿಂಭಾಗದ ಪೀಠದಲ್ಲಿ ಅನುಭವ ಮಂಟಪದ ಕಲ್ಪನೆಯನ್ನು ಕಟ್ಟಲು ನಾಲ್ಕು ಕಂಬಗಳ ಮೇಲೆ ರೂಪಿಸಿದ ಮಂಟಪ. ಅದರೊಳಗೆ ಇತರ ಜ್ಞಾನಿಗಳ ನಡುವೆ ಶರಣೆ ಅಕ್ಕ ಮಹಾದೇವಿ ಹಾಗೂ ಅಲ್ಲಮರ ನಡುವೆ ನಡೆದ ಚರ್ಚೆಯ ಸನ್ನಿವೇಶ. ಮಂಟಪದ ಮೇಲ್ಭಾಗದ ತೊಲೆಯ ಮೇಲೆ ಅನುಭವ ಮಂಟಪದ ಕಾಲ-ಸ್ಥಳದ ಅಕ್ಷರ ರೂಪ. ಕೆಳಭಾಗದಲ್ಲಿ ಆ ಕಾಲಘಟ್ಟದ ಜಾನಪದ ಕಲೆಗಳ ಅನಾವರಣ. ಜೊತೆಗೆ ಅನುಭವ ಮಂಟಪದ ಅನುಭವವನ್ನು ಮತ್ತಷ್ಟು ಹಿಗ್ಗಿಸುವ ಹಿನ್ನೆಲೆಯಲ್ಲಿ ಲಯಬದ್ಧವಾಗಿ ಹರಿದು ಬರುವ ವಚನಗಾಯನ ಇರಲಿದೆ.

ಇಲಾಖೆ 2010 ರಿಂದ ಕಳೆದ 11 ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಸ್ತಬ್ದಚಿತ್ರದೊಂದಿಗೆ ಭಾಗವಹಿಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಇಲಾಖೆಗೆ ಇದು ರಾಷ್ಟ್ರಮಟ್ಟದಲ್ಲಿ ಹೆಮ್ಮೆ ತರುವ ಸಂಗತಿಯಾಗಿದೆ.

ಗಣರಾಜ್ಯೋತ್ಸವ ಪರೇಡ್‍ನಲ್ಲಿ ಇಲಾಖೆಗೆ ಈವರೆಗೆ 5 ಬಾರಿ ಪ್ರಶಸ್ತಿ ಗಳಿಸಿದ್ದು, ಒಂದು ಬಾರಿ ಪ್ರಥಮ, 2 ಬಾರಿ ದ್ವಿತೀಯ ಹಾಗೂ 2 ಬಾರಿ ತೃತೀಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಎಮ್. ಕಂಬಿ, ಸಹಾಯಕ ನಿರ್ದೇಶಕ ಡಾ.ಗಿರೀಶ್.ಎಲ್.ಪಿ, ಸಬ್ದಚಿತ್ರದ ವಿನ್ಯಾಸಕ ಶಶಿಧರ ಅಡಪ ಭಾಗವಹಿಸಿದ್ದರು.

About the Author

-

Powered By Indic IME