Published On: Mon, Jun 15th, 2020

ಆಂಧ್ರಪ್ರದೇಶಕ್ಕೆ 17ರಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ

Share This
Tags
ಕರ್ನಾಟಕರಾಜ್ಯ ಸಾರಿಗೆ ಸಂಸ್ಥೆಗಳ ಸಾರಿಗೆಗಳನ್ನು ಆಂಧ್ರಪ್ರದೇಶ ರಾಜ್ಯಕ್ಕೆ ದಿನಾಂಕ ೧೭.೦೬.೨೦೨೦ರಿಂದ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತಿದೆ.
ಮೊದಲ ಹಂತದಲ್ಲಿ ಈ ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ.
ಬೆಂಗಳೂರಿನಿಂದ ಅನಂತಪುರ, ಹಿಂದುಪುರ, ಕದ್ರಿ, ಪುಟ್ಟಪರ್ತಿ, ಕಲ್ಯಾಣದುರ್ಗ, ರಾಯದುರ್ಗ, ಕಡಪ, ಪ್ರೂದತ್ತೂರು, ಮಂತ್ರಾಲಯ, ತಿರುಪತಿ, ಚಿತ್ತೂರು, ಮದನಪಲ್ಲಿ, ನೆಲ್ಲೂರು ಮತ್ತು ವಿಜಯವಾಡ.
ಬಳ್ಳಾರಿಯಿಂದ ವಿಜಯವಾಡ, ಅನಂತಪುರ, ಕರ್ನೂಲ್ ಮತ್ತು ಮಂತ್ರಾಲಯ. ರಾಯಚೂರಿನಿಂದ ಮಂತ್ರಾಲಯ.
ಶಾಹಪುರದಿಂದ ಮಂತ್ರಾಲಯ ಮತ್ತು ಕರ್ನೂಲ್.
ಈ ಮೇಲ್ಕಂಡ ಮಾರ್ಗಗಳಲ್ಲಿ ಮುಂಗಡ ಆಸನಗಳನ್ನು www.ksrtc.in ವೆಬ್‌ಸೈಟ್‌ಮತ್ತು ನಿಗಮದ/ಫ್ರಾಂಚೈಸಿ ಕೌಂಟರ್‌ಗಳ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ. ಸದರಿ ಸೌಲಭ್ಯವನ್ನು ಪ್ರಯಾಣಿಕರು ಸದುಪಯೋಗ ಪಡೆಯಲುಕೋರಲಾಗಿದೆ.

About the Author

-

Powered By Indic IME