Published On: Mon, Jun 15th, 2020

ಆನ್ ಲೈನ್ ಯಕ್ಷಗಾನ ಭಾಗವತಿಕೆ ಮತ್ತು ನಾಟ್ಯ ತರಗತಿ

Share This
Tags
  • ಮಾರ್ಚ್ ಅಂತ್ಯಕ್ಕೆ ಭಾರತದಲ್ಲಿ ಜಾರಿಯಾಗಲ್ಪಟ್ಟ ಲಾಕ್ ಡೌನ್ ಎಲ್ಲಾ ಉದ್ಯಮ ಮತ್ತು ವಿದ್ಯಮಾನಗಳ ರೂಪುರೇಷೆಯನ್ನು ಬದಲಿಸಿತು. ಯಕ್ಷಗಾನ ಕಲಿಕಾ ಕ್ಷೇತ್ರವೂ ಈ ಪ್ರಭಾವದಿಂದ ತಪ್ಪಿಸಿಕೊಳ್ಳಲಿಲ್ಲ. ವಾರ ಪೂರ್ತಿ, ವಾರಾಂತ್ಯದಲ್ಲಿ ನಡೆಯುತ್ತಿದ್ದ ಎಲ್ಲಾ ತರಗತಿಗಳೂ ನಿಂತು ಹೋದವು. ಆ ಸಮಯದಲ್ಲೇ ಈ ಆನ್‍ ಲೈನ್ ತರಗತಿಗಳ ಯೋಚನೆ ಮೊಳಕೆಯೊಡೆದಿದ್ದು.
  • ನಾನು ಬೆಂಗಳೂರಿನಲ್ಲಿ, ನನ್ನ ಮುಖ್ಯ ಚಟುವಟಿಕೆಯಾದ ಸಿನೆಮಾದಲ್ಲಿ ಸಕ್ರಿಯನಾಗಿದ್ದುಕೊಂಡು, ರಂಗಭೂಮಿಯ ಚಟುವಟಿಕೆ ಮತ್ತು ಬೇರೆ ಬೇರೆ ಯಕ್ಷಗಾನ ತಂಡಗಳಿಗೆ ತರಬೇತಿ ನೀಡುವುದು, ನನ್ನದೇ ಒಂದು ತರಬೇತಿ ಕೇಂದ್ರ ನಿರ್ವಹಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿದ್ದೆ. ಲಾಕ್ ಡೌನ್ ನಿಂದಾಗಿ ಈ ಎಲ್ಲ ಚಟುವಟಿಕೆ ನಿಂತಾಗ ನಾನು ತರಗತಿ ಮಾಡುತ್ತಿದ್ದ ತಂಡಗಳು ನಾವು ಆನ್‍ಲೈನ್‍ನಲ್ಲಿ ಕಲಿಕೆ ಮುಂದುವರಿಸೋಣ ಎಂದರು. ಹಾಗೆ ಪ್ರಯೋಗ ಆರಂಭಿಸಿ ಯಶಸ್ವಿಯಾದ ಬಳಿಕ, ಈಗ ಪ್ರಪಂಚದಾದ್ಯಂತ ಹರಡಿಕೊಂಡಿರುವ ಯಕ್ಷಗಾನ ಆಸಕ್ತರನ್ನು ತಲುಪುವ ಉದ್ದೇಶದಿಂದ, ಈ ಆನ್‍ಲೈನ್ ತರಗತಿಯ ಯೋಜನೆಯನ್ನು ಹಾಕಿಕೊಂಡಿದ್ದೇನೆ.

 ತರಗತಿಯ ವಿವರ:

  • ಆನ್ ಲೈನ್ ಯಕ್ಷಗಾನ ಭಾಗವತಿಕೆ ಮತ್ತು ನಾಟ್ಯ ತರಗತಿ.
  • ಕೋರ್ಸ್‍ ನ ಅವಧಿ: ಜುಲೈ ಮೊದಲ ವಾರಾಂತ್ಯದಿಂದ ಸೆಪ್ಟೆಂಬರ್ ವರೆಗೆ.  3 ತಿಂಗಳ ಪರಿಚಯಾತ್ಮಕ ತರಗತಿಗಳು.
  • ತರಗತಿಯ ವಿವಿಧ ಬ್ಯಾಚ್‍ಗಳ ವೇಳಾಪಟ್ಟಿ:

ಶನಿವಾರ 10am to 11.30am ಭಾಗವತಿಕೆ

                12pm to 1.30pm ನಾಟ್ಯ

                3pm to 4.30pm ಭಾಗವತಿಕೆ

                5pm to 6.30pm ನಾಟ್ಯ

ಭಾನುವಾರ 10am to 11.30am ಭಾಗವತಿಕೆ

                12pm to 1.30pm ನಾಟ್ಯ

  • ಭಾರತದಿಂದ ಹೊರಗೆ ವಾಸವಾಗಿರುವ ಅಭ್ಯರ್ಥಿಗಳಿಗೆ ಬೇರೆಯದೇ ಆದ ವೇಳಾಪಟ್ಟಯಲ್ಲಿ ತರಗತಿ ನಡೆಯುತ್ತದೆ.
  • ಪಠ್ಯ-

ಭಾಗವತಿಕೆ: ತೆಂಕುತಿಟ್ಟು ಯಕ್ಷಗಾನ ಪೂರ್ವರಂಗದ ಪರಿಚಯ ಮತ್ತು ಪ್ರಸಂಗಾಭ್ಯಾಸದ ಪರಿಚಯ

ನಾಟ್ಯ: ತೆಂಕುತಿಟ್ಟು ಯಕ್ಷಗಾನದ ಪ್ರಾಥಮಿಕ ತಾಳಗಳ ಪರಿಚಯ ಮತ್ತು ಯಕ್ಷಗಾನದ ದೇಹಾಂಗ.

  • ಪಾಠವು ಕನ್ನಡ ಇಂಗ್ಲಿಶ್ ಎರಡೂ ಭಾಷೆಗಳಲ್ಲಿ ನಡೆಯುತ್ತದೆ. ಆದರೆ ಯಕ್ಷಗಾನದ ಪಠ್ಯ, ಪದ್ಯ ಕನ್ನಡದಲ್ಲೇ ಇರುತ್ತದೆ.
  • ಬೋಧಕರು: ಪ್ರಸಾದ್ ಚೇರ್ಕಾಡಿ- ಕಟೀಲು ಎಡನೀರು ಮೇಳಗಳ ಅನುಭವಿ ಯಕ್ಷಗಾನ ಕಲಾವಿದ, ಯಕ್ಷಗಾನ ಶಿಕ್ಷಕ, ಭಾಗವತ, ಚಲನಚಿತ್ರ ಮತ್ತು ರಂಗಭೂಮಿ ನಟ.
  • ರಿಜಿಸ್ಟ್ರೇಶನ್ ಮತ್ತು ಇತರ

ಮಾಹಿತಿಗಾಗಿ ಸಂಪರ್ಕ:   +91 9741508468, kathegaararu@gmail.com

About the Author

-

Powered By Indic IME