Published On: Wed, Feb 13th, 2013
Jobs | By Raju

ಸಿಎಪಿಎಫ್‌ನಲ್ಲಿ ಪೇದೆಗಳ ನೇಮಕಾತಿ

Share This
Tags
ಬೆಂಗಳೂರು : ಫೆಬ್ರವರಿ, ೧೨ ೨೦೧೩: ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಸಿಎಪಿಎಫ್‌ನ ೨೦೧೨ನೇ ಸಾಲಿನ ಕಾನ್ಸ್‌ಟೇಬಲ್‌ಗಳ (ಜಿಡಿ) ನೇಮಕಾತಿಯ ಅಂತಿಮ ಫಲಿತಾಂಶಗಳನ್ನು ಘೋಷಿಸಿದ್ದು,

ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ (ಸಿಎಪಿಎಫ್) ರವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಎಪಿಎಫ್‌ನಿಂದ ನೇರವಾಗಿ ನೇಮಕಾತಿ ಆದೇಶ ಲಭಿಸಲಿದೆ.
ಕೆಲವು ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಎಸ್‌ಎಸ್‌ಸಿಯಿಂದ ದೂರವಾಣಿ ಕರೆಗಳು/ಎಸ್‌ಎಂಎಸ್‌ಗಳು ಸ್ವೀಕೃತವಾಗಿ ಹಣಕ್ಕಾಗಿ ಒತ್ತಾಯಿಸಿದ ಸಂಗತಿ ಬಗ್ಗೆ ಇತ್ತೀಚೆಗೆ ಎಸ್‌ಎಸ್‌ಸಿ ಗಮನಕ್ಕೆ ಬಂದಿದೆ. ಅಭ್ಯರ್ಥಿಗಳು ಇದನ್ನು ನಂಬಬಾರದು ಹಾಗೂ ಇಂಥ ಯಾವುದೇ ಅನಾಮಧೇಯ ವ್ಯಕ್ತಿಗಳಿಗೆ ಹಣ ನೀಡದಂತೆ ಸೂಚಿಸಲಾಗಿದೆ. ಇಂಥ ಯಾವುದೇ ಕರೆಗಳು ಬಂದಲ್ಲಿ ಎಸ್‌ಎಸ್‌ಸಿ ಗಮನಕ್ಕೆ ತರುವಂತೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.
ಇಂಥ ಯಾವುದೇ ಕರೆಗಳಲ್ಲಿ ಎಸ್‌ಎಸ್‌ಸಿ ತೊಡಗಿಲ್ಲ. ಸಿಬ್ಬಂದಿ ನೇಮಕಾತಿ ಆಯೋಗದ ಕಚೇರಿಗಳಲ್ಲಿ ಮಾತ್ರ ವ್ಯವಹರಿಸುವಂತೆ ಹಾಗೂ ಇಂಥ ಅನಾಮಧೇಯ ವ್ಯಕ್ತಿಗಳ ಬಲೆಗೆ ಬೀಳದಂತೆ ಸಲಹೆ ಮಾಡಲಾಗಿದೆ.

About the Author

-

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Powered By Indic IME